ಕಾಳಿದಾಸ್ ಸಮ್ಮಾನ್ಭಾರತದ ಮಧ್ಯಪ್ರದೇಶದ ಸರ್ಕಾರ ವಾರ್ಷಿಕವಾಗಿ ನೀಡುವ ಪ್ರತಿಷ್ಠಿತ ಕಲೆಗಳ ಪ್ರಶಸ್ತಿ. ಪ್ರಶಸ್ತಿಗೆ ಕಾಳಿದಾಸ, ಪ್ರಾಚೀನ ಭಾರತದ ಹೆಸರಾಂತ ಶಾಸ್ತ್ರೀಯ ಸಂಸ್ಕೃತ ಬರಹಗಾರನ ಹೆಸರಿಡಲಾಗಿದೆ. ಕಾಳಿದಾಸ ಸಮ್ಮಾನ್ ಮೊದಲ ಪ್ರಶಸ್ತಿಯನ್ನು 1980 ರಲ್ಲಿ ನೀಡಲಾಯಿತು ಆರಂಭದಲ್ಲಿ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ರಂಗಕಲೆ ಮತ್ತು ಪ್ಲಾಸ್ಟಿಕ್ ಆರ್ಟ್ಸ್ ಕ್ಷೇತ್ರಗಳಲ್ಲಿ ಪರ್ಯಾಯ ವರ್ಷಗಳಲ್ಲಿ ಪ್ರಧಾನ ಮಾಡಲಾಯಿತು. 1986-87 ರ ನಂತರದಲ್ಲಿ, ಈ ಪ್ರಶಸ್ತಿಯನ್ನು ಪ್ರತಿ ವರ್ಷ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ನೀಡಲಾಗುತ್ತಿದೆ. == ಪ್ರಶಸ್ತಿ ಮತ್ತು ಆಯ್ಕೆ == ಪ್ರಸ್ತುತ, ಪ್ರಶಸ್ತಿಯು 2,00,000 ರೂಪಾಯಿ ನಗದು ಒಳಗೊಂಡಿದೆ. ವಿಜೇತರನ್ನು ಶ್ರೇಷ್ಠ ಕಲಾವಿದರು, ಕಲಾ ವಿಮರ್ಶಕರು ಮತ್ತು ಸಂಗೀತ ನಾಟಕ ಅಕಾಡೆಮಿಯ (ಸಂಗೀತ, ನೃತ್ಯ ಹಾಗೂ ನಾಟಕಕ್ಕೆ ಭಾರತದ ರಾಷ್ಟ್ರೀಯ ಅಕಾಡೆಮಿ) ಅಧಿಕಾರಿಗಳು ಒಳಗೊಂಡಿರುವ ಮಧ್ಯಪ್ರದೇಶ ಸರ್ಕಾರವು ನೇಮಕ ಮಾಡಿದ ಐದು ಸದಸ್ಯರ ಸಮಿತಿಯು ಆಯ್ಕೆ ಮಾಡುತ್ತದೆ. == ಪ್ರಶಸ್ತಿ ವಿಜೇತರು == ಪ್ರಶಸ್ತಿ ವಿಜೇತರ ಪಟ್ಟಿಯು ಈ ಕೆಳಗಿನಂತಿದೆ. == ಉಲ್ಲೇಖಗಳು ==